Poreyenna poreyenna pundarikaksha
ಪೊರೆಯನ್ನ ಪೊರೆಯನ್ನ ಪುಂಡರಿಕಾಕ್ಷ ಪಂಕಜ ನಾಭ ಶ್ರೀ ಪಂಡರಿ ರಾಯ । ಭವ ಗಡು ಗಾಡಲಿ ತಿರುಗುತ್ತಿರುಗುತಿರೆ. ಕವಿದಿರೆ ಕತ್ತಲು ಒಳಪೊರ ಗೆಲ್ಲಲು । ಕವಿನಿನ್ನ ಮಹಿಮೆಂಬ ಇನನನ್ನೆ ಕಳುಹಿಸೋ. ಭವಬೊಮ್ಮ ಪ್ರವರ್ತಕ ಪ್ರಭುವೆನ್ನ ಕೇಶವ ।।೧।। ಸರ್ವಗುಣ ಪೂರ್ಣನೆ ಸರ್ವದೋಷ ದೂರನೆ. ಸರ್ವ ಗುಣಗಳಿಂದಲಿ ಚತುರ್ಮುಖೋಪಾಸ್ಯನೆ । ಸರ್ವರಿಂದ ಗಮ್ಯನೆ ಬ್ರಹ್ಮಸೂತ್ರಗಳ್ನಿತ್ಯ. ಸರ್ವಾಧ್ಯಾಯಪ್ರತಿಪಾದ್ಯ ದೊರೆಯನ್ನ ನಾರಾಯಣ।। ೨ ।। ಶುದ್ದಿಮಾಡೋ ಎನ್ನಮನ ಬಿನ್ನೈಪೆನು ನಾ ನಿನ್ನ . ಬದ್ಧನಾಗಿ ಒದ್ದಾಡುವೆ ತ್ರಿಗುಣಂಗಳ್ರಜ್ಜುವಿಂದ । ಸಿದ್ಧಿಗಳ ನೀನಯ್ಯ ಸಾಧನೆಗಳ್ತ್ವರದಲಿ. ಬುದ್ಧಿಯಿತ್ತು ಸಲಹಯ್ಯ ರಮ್ಮೆ ಪತಿ ಮಾಧವನೆ ।।೩।। ಕಾದಿರುವೆ ಸದಾ ನಿನ್ನ ಕರುಣೆಯು ಬಾಹುದೆಂದು. ಬಂದಿರುವೆ ನಿನ್ನಲ್ನಾನು ಮೊರೆಯನ್ನು ಪೋಕ್ಕುತಲಿ। ಕುಂದನೇಣಿಸದೆಯನ್ನು ಸಲಹೆನ್ನ ದಯತೋರಿ. ವೇದಗಳಿಂವೇದ್ಯನಯ್ಯ ತಂದೆಯೆ ಶ್ರೀಗೊವಿಂದನೆ ।। ೪ ।। ಇಷ್ಟು ಕೋಪವೇಂತಯ್ಯ ನಿತ್ಯದಯಿ ಶ್ರೀಪತಿ . ಕಷ್ಟದವೆಲ್ಲ ತೆರೆಯಯ್ಯ ಕರುಣಾಳು ಭವದಲ್ಲಿ । ಶಿಷ್ಟ ಪ್ರೀತ ಭಕ್ತಪ್ರೇಮಿ ಪೇಳಲೆಂತೋ ನಿನ್ನ ಗುಣ . ಇಷ್ಟಂತಿಲ್ಲಾದಷ್ಟಂತಿಲ್ಲ ವ್ಯಾಪ್ತ ದೊರೆ ವಿಷ್ಣೋ ಎನ್ನ ।।೫।। ಗುಣವೊಂದನಾದರು ಅರಿಯುವಬಲವಿಲ್ಲ. ಮಣಮಣ ದೋಷದಿಂದ ಗ್ರಸ್ತನಾಗಿ ಕೆಟ್ಟಿರುವೆ। ಅಣಿಮಾದಿಮಹಿಮನೆ ತವಕದಿನ್ದುದ್ಧರಿಸೋ. ಅಣುರೇಣುವಿತತನೆ ತಂದೆಮಧುಸೂದನ ।। ೬ ।। ಅಣ್ಣ ಶಕ್ರದೇವ ಬೇಡೆ ತಮ್ಮನಾಗಿ...