Posts

Poreyenna poreyenna pundarikaksha

ಪೊರೆಯನ್ನ ಪೊರೆಯನ್ನ ಪುಂಡರಿಕಾಕ್ಷ ಪಂಕಜ ನಾಭ ಶ್ರೀ ಪಂಡರಿ ರಾಯ । ಭವ ಗಡು ಗಾಡಲಿ ತಿರುಗುತ್ತಿರುಗುತಿರೆ. ಕವಿದಿರೆ ಕತ್ತಲು ಒಳಪೊರ ಗೆಲ್ಲಲು । ಕವಿನಿನ್ನ ಮಹಿಮೆಂಬ ಇನನನ್ನೆ  ಕಳುಹಿಸೋ. ಭವಬೊಮ್ಮ ಪ್ರವರ್ತಕ ಪ್ರಭುವೆನ್ನ ಕೇಶವ ।।೧।। ಸರ್ವಗುಣ ಪೂರ್ಣನೆ ಸರ್ವದೋಷ ದೂರನೆ. ಸರ್ವ ಗುಣಗಳಿಂದಲಿ ಚತುರ್ಮುಖೋಪಾಸ್ಯನೆ । ಸರ್ವರಿಂದ ಗಮ್ಯನೆ ಬ್ರಹ್ಮಸೂತ್ರಗಳ್ನಿತ್ಯ. ಸರ್ವಾಧ್ಯಾಯಪ್ರತಿಪಾದ್ಯ ದೊರೆಯನ್ನ ನಾರಾಯಣ।। ೨ ।। ಶುದ್ದಿಮಾಡೋ ಎನ್ನಮನ ಬಿನ್ನೈಪೆನು ನಾ ನಿನ್ನ . ಬದ್ಧನಾಗಿ ಒದ್ದಾಡುವೆ ತ್ರಿಗುಣಂಗಳ್ರಜ್ಜುವಿಂದ । ಸಿದ್ಧಿಗಳ ನೀನಯ್ಯ ಸಾಧನೆಗಳ್ತ್ವರದಲಿ. ಬುದ್ಧಿಯಿತ್ತು ಸಲಹಯ್ಯ ರಮ್ಮೆ ಪತಿ ಮಾಧವನೆ ।।೩।। ಕಾದಿರುವೆ ಸದಾ ನಿನ್ನ ಕರುಣೆಯು ಬಾಹುದೆಂದು. ಬಂದಿರುವೆ ನಿನ್ನಲ್ನಾನು ಮೊರೆಯನ್ನು ಪೋಕ್ಕುತಲಿ। ಕುಂದನೇಣಿಸದೆಯನ್ನು ಸಲಹೆನ್ನ ದಯತೋರಿ. ವೇದಗಳಿಂವೇದ್ಯನಯ್ಯ ತಂದೆಯೆ ಶ್ರೀಗೊವಿಂದನೆ ।। ೪ ।। ಇಷ್ಟು ಕೋಪವೇಂತಯ್ಯ ನಿತ್ಯದಯಿ ಶ್ರೀಪತಿ . ಕಷ್ಟದವೆಲ್ಲ ತೆರೆಯಯ್ಯ  ಕರುಣಾಳು ಭವದಲ್ಲಿ । ಶಿಷ್ಟ ಪ್ರೀತ ಭಕ್ತಪ್ರೇಮಿ ಪೇಳಲೆಂತೋ ನಿನ್ನ ಗುಣ . ಇಷ್ಟಂತಿಲ್ಲಾದಷ್ಟಂತಿಲ್ಲ ವ್ಯಾಪ್ತ ದೊರೆ ವಿಷ್ಣೋ ಎನ್ನ ।।೫।। ಗುಣವೊಂದನಾದರು ಅರಿಯುವಬಲವಿಲ್ಲ. ಮಣಮಣ ದೋಷದಿಂದ ಗ್ರಸ್ತನಾಗಿ ಕೆಟ್ಟಿರುವೆ। ಅಣಿಮಾದಿಮಹಿಮನೆ ತವಕದಿನ್ದುದ್ಧರಿಸೋ.  ಅಣುರೇಣುವಿತತನೆ ತಂದೆಮಧುಸೂದನ ।। ೬ ।। ಅಣ್ಣ ಶಕ್ರದೇವ ಬೇಡೆ ತಮ್ಮನಾಗಿ...

Namo namo Vadiraja

 ಭಜನಾ ಧಾಟಿ. ನಮೊನಮೊ ನಮೊನೆಮೊ ವಾದಿರಾಜ | ನಮೊನಮೊ ಶರಣರ ಸುರಭೂಜ || ಹಯಮುಖ ನೋಲಿಸಿದೆ ವಾದಿರಾಜ | ಭಯಗಳ ಕೆಳೆವನೆ ವಾದಿರಾಜ | | ಭಾವಿಸಮೀರನೆ ವಾದಿರಾಜ | ಭೂವರಹ ಪ್ರಿಯ ವಾದಿರಾಜ | | ಭೂಸುರ ವರ್ಯನೆ ವಾದಿರಾಜ | ಸೂಸುವ ಸುಖವನು ವಾದಿರಾಜ | | ಯುಕುತಿಯ ಮಲ್ಲಿಗೆ ವಾದಿರಾಜ |  ಮುಕುತಿಗೆ ಮಾಡಿದೆ ವಾದಿರಾಜ | | ಮುನಿಕುಲರನ್ನನೆ ವಾದಿರಾಜ | ಮುನಿಗಳ ವಂದಿತ ವಾದಿರಾಜ | | ಕಾಕು ಮತಂಗಳ ವಾದಿರಾಜ | ಸಾಕು ಗೊಳಸಿದಾ ವಾದಿರಾಜ II ಯತಿಕುಲಮುಕುಟನೆ ವಾದಿರಾಜ | ವ್ರತ ತಪಸಿನ ಗುರು ವಾದಿರಾಜ II ಮಧ್ವರ ದಾಸನೆ ವಾದಿರಾಜ | ಬದ್ಧರ ಬಿಡಿಸುವ ವಾದಿರಾಜ I l  ವಿಮಲ ಜ್ಞಾನನೆ ವಾದಿರಾಜ | ಶಮಲವ ಹರಿಪನೆ ವಾದಿರಾಜ II   ರಾಜರರಾಜನೇ ವಾದಿರಾಜ I ವಾದಿರಾಜ ಗುರು ವಾದಿರಾಜ | | ಸಿರಿ ಮಧ್ವ ನಾಥನ ವಾದಿರಾಜ ಮರಳುಗೊಳಿಸಿದನೆ ವಾದಿರಾಜ ||

Deva bandanu Odeya bandanu

ದೇವ ಬಂದನು ಒಡೆಯ ಬಂದನು ಕಾವ ಗೋಗಳ ಬಂದನು | ಕಾವ ಗೋಗಳ ಕಾಮಿತಾರ್ಥವ ನೀವ ಭಕುತಗೆ ಬಂದನು || ೧ ಮುದ್ದು ಮುಂಗುರುಲಾಸ್ಯದ ಚೆಲುವ ಒದ್ದು ಬಂಡಿಯ ಲೇಲೆಲಿ | ಒದ್ದು ಬಂಡಿಯ ಲೇಲೆಲಿ ರಂಗದಿ ಗೆದ್ದು ಮಾವನ ಮೋಹನ || ೨ ನೀಲ ಬಣ್ಣದ ಮಯ್ಯವ ಬಂದನು ನೀಲ ವಸನನ ಸಹಜನು | ನೀಲ ವಸ್ತ್ರನ ತಮ್ಮನು ಅಂಬುಜ ಮಾಲನು ಆಡುತ ಬಂದನು || ೩ ಸತಿಗೆ ಪುಷ್ಪದ ಭೂರುಹವಿತ್ತವ ಪತಿತ ಪಾವನ ಬಂದನು | ಪತಿತ ಪಾವನ ದಾಸರು ಪಾಡುವ ತುತಿಗೆ ಹಿಗ್ಗುವ ಬಂದನು || ೪ ನಾಥ ರಕ್ಷಿಸು ಎನ್ನುತಲಾ ಮಹ ಗಾತ್ರನು ಸೂನವನರ್ಪಿಸಲು | ವಾತನಯ್ಯನು ಬಂದನು ಮಧ್ವ ನಾಥನು ಪಕ್ಷಿಯ ವಾಹನ || ೫

Vysarendare Vedavysa

ವ್ಯಾಸರೆಂದರೆ ವೇದವ್ಯಾಸ ದೇವರ ದೇವ | ಪ  ಘಾಸಿ ಮಾಡದೆ ಇವನ ಭಜಿಸೆಲೊ ಮನುಜ | ಅ.ಪ. ವರಜಟಾ ಮಂಡಲ ಮುನಿಗಳ ಪುಂಗವ ಪರಿಪರಿ ಶೃತಿಗಳ ಕಡೆದವನಂದದಿ | ಪುರಹರನಂಶನ ಜನಕನು ಸೂರಿಯು ಹರಿನಿಲದ ನೀಲ ಮಯ್ಯವಗುಣಿಯು || ೧ ತುಂಬುರು ನಾರದ ದಿವಿಜರ ಪ್ರೀತನು ಬೆಂಬಿಡದೆ ಕಾಮಿತ ವರಗಳ ನೀವನು| ಜಂಬುನದಾಂಬರ ಮಣಿಗಳ ಮಾಲನು ಅಂಬುಜನಯನನು ಇಂದಿರೆ ರಮಣನು || ೨ ಪರಶರ ಋಷಿಗಳ ನಂದನ ನಂದನು ಸುರರನು ಭೋದಿಪ ಮುರಹರರೂಪನು| ಗುರುವರ ಜಗಕೆಲ್ಲ ಸೂತ್ರದ ಕರುತು ಗುರುಮಧ್ವರಾಯರ ಇಷ್ಟದ ದೈವತ || ೩ ವ್ರತ ಯಜ್ಞ ತಪಸಿಗೆ ನಿಲುಕದ ಮಾಣಿಕ ಪತಿತಭಕುತರನು ಸೆಳೆಯುವ ಮುಕುತಿಗೆ| ಹತಮಾಡುವನೀತ ಅಸುರರ ಸಮರದಿ ರತಿಪತಿಜನಕನು ಮೊಸಳೆಯ ಪಾಲನು || ೪ ಭವವೆಂಬ ಕಡಲನು ತರಿಸುವ ನೌಕನು ಕವಿಗಳ ಹೃದಯಕೆ ಮನೋಹರಮೂರುತಿ | ಗವಿಯೊಳಗಿರುವನು ಒಂದೇಳಲಾಡುವನು  ಜವಪಿತ ಗುರುಮಧ್ವ ನಾಥನ ಪೆಸರವ || ೫ 

Jayatu Matsyane Jayatu Koormane

ಜಯತು ಮತ್ಸ್ಯನೆ ಜಯತು ಕೂರ್ಮನೆ ಜಯತು ಕ್ರೋಡನೆ ಜಯತು ನರಹರಿ  ಜಯತು ವಾಮನ ಜಯತು ಭಾರ್ಗವ ಜಯತು ರಾಘವನೇ | ಜಯತು ಕೃಷ್ಣನೆ ಜಯತು  ಬುದ್ಧನೆ ಜಯತು ಕಲ್ಕಿಯೆ ಜಯತು ದೇವನೆ ಜಯತು ರುಕ್ಮಿಣಿಪತಿಯೆ ನಿನ್ನಯ ಪದಕ್ಕೆ ಬಾಗುವೆನು ||  ಮತಿಗೆ ಸಲ್ಲದ ಮಹಿಮನಯ್ಯನೆ ಮತಿಗೆ ತೋರುವ ಮಹಿಮೆ ಪೇಳುವೆ ಸತಿಯ ಜತೆಯಲಿ ಪ್ರೇಮದಿಂದಲಿ ಕಲಹ ಮಾಡಿದನು | ಮತಿಯ ಪಾಲಿಸಿ ಸಲಹು ಎನ್ನನು ರತಿಯ ಕಾಂತನ ಜನಕ ವಿಷ್ಣುವೇ ಸತತ ದುರ್ಜನಹಾರಿ ಲಕುಮೀಕಾಂತ ಎನ್ನೊಡೆಯ || ಅಹಿಪಶಾಯಿಯ ಕಮ್ಮಜನಕನ ಮಹಿಷಿಯಿಪ್ಪರು ವಂದ್ಯ ಪದೆಯರು ಮಹಿತಮಹಿಮನ ಪ್ರೇಮ ವಿಷಯಯರು ದ್ವ್ಯಧಿಕಷಡ್ಜನರು | ಮಹಿಯೊಳಿಪ್ಪರೆ ಎಲ್ಲ ಕೇಳಿರಿ ತುಹಿನ ಕಿರಣನ ವಂಶ ರನ್ನಗೆ ಅಹಿಯ ಮರ್ಧನಗಧಿಕಪ್ರೀಯರು ಸತ್ಯೆಭೈಷ್ಮಿಯರು || ಏಸು ಮಹಿಮಳು ರುಗ್ಗ್ಮಿಯನುಜೆಯು ದಾಸಿ ಪಿಡಿದ ಸುರನ್ನದಂಡದ  ಬೀಸೊ ಪತ್ರವ ತಾನೇ ಪಿಡಿಯುತ ಸೇವೆ ಗಯ್ಯುತಿರೆ | ದಾಸರೊಡೆಯನು ಗೋಪಿನಂದನ ದಾಸಿಭೈಷ್ಮಿಯ ಮೊಗವ ನೋಡುತ ಹಾಸ ಮಾಡುತ ಮಾತನಾಡಿದ ಜನವಿಡಂಬಕನು || ಆವ ಭೂಪರ ಸಾಮ್ಯ ಸಲ್ಲನು ಆವ ಸೊಬಗಂಗಳಲಿ ಪೇಳೆಲೆ ಕಾವೆ ಗೋಗಳ ಕೋಲ ಪಿಡಿಯುತ ನಲಿವೆ ಅಟವಿಯಲಿ | ಕಾವರಿಲ್ಲವೆ ಭಯದಿ ಕಡಲೋ ಳಾವರಣ್ಣವ ಕಟ್ಟಿ ಇಪ್ಪೆನು ಆವ ಗುಣಗಳು ಎನ್ನಲಿಲ್ಲವೆ ಕೇಳೆ ಮಂಗಳೆಯೆ || ಅರಸಿ ಬಡವರಿಗಧಿಕ ಪ್ರೀಯನು ಹರಕು ಭಿಕ್ಷುಕ ತುತಿಪನೆನ್ನನು ಮರಳುವಾದೆಯೆ ಯಾವ ಬಗೆಯಲಿ ಪೇಳೆ ರುಕ್ಮಿಣಿಯೆ| ತರುಣಿ ಬುದ್ಧಿಯು ಇಲ್ಲ ನಿನಗೆ ಮುರನ ವೈರ...

Mahadevara Mahime

ಮಹಾದೇವರ ಮಹಿಮೆ ಏನೆಂದು ಬಣ್ಣಿಸಲಿ || ಪ || ಮಹೀಧರ ನಳಿಯನ ಸುಜನ ಶಿರೋಮಣಿ || ಅ.ಪ || ಕಮಲ ನಾಭನ ನಾಭಿ | ಕಮಲದಿ ರಾಜಿಪ |  ಕಮಲಾಸನನಂಕ ವೇರಿರಲು | ಕಮಲಾಕ್ಷನ ಸಖ ನಿ- | ಮ್ಮಂಗದಿ ನೋಡಿದ |  ಕಮಲೇಶನ ವಿಶ್ವರೂಪ ವಂದದಲಿ ||೧|| ಪತಿಯ ನಿಂದೆಯ ಕೇಳಿ |  ಸತಿಯು ದೇಹವ ಬಿಡೆ  ಉಮೆಯರಸನೆ ನಿಮ್ಮ ಸಹನೆಯು ಕೆಡಲು | ಅತಿಕೋಪದಿ ವೀರ | ಭದ್ರ ರೂಪದಿ ಬಂದು  ಹತ ಮಾಡಿದೆ ಮಾವ ದಕ್ಷನ ಶಿರವ ||೨|| ಪಾಲಿನ ಗಡಲನು |ಮಥನವ ಮಾಡಿರೆ ಹಲಾಹಲವನು ಪಾನವ ಮಾಡಿದೆ. | ನೀಲ ಕಂಧರನೆನಿಸಿ ಜಗದಲಿ ಮೆರೆದೆ | ಶೂಲಧಾರಿಯೆ ಜಗವ ಪಾಲಿಪ ಹರನೆ || ೩|| ವಿರಕುತಿಶಾಲಿಯೆ ಮುರಹರ ದಾಸನೆ| ಹರಿಯಲಿಮನಗೊಡು ಮನದಧಿಪತಿಯೆ | ಸಿರಿ ಮಧ್ವ ನಾಥನ ತೋರಿಸಿ ಭವಭಯ ಹರಣವ ಮಾಡುತ ಪೊರೆಯುವ ದೊರೆಯೇ || ೪ ||

Kusina kandira namma Guruvyasara kandira

ಕೂಸಿನ ಕಂಡೀರಾ ನಮ್ಮ ಗುರು ವ್ಯಾಸರ ಕಂಡೀರಾ | ರಾಜರ ಕಂಡೀರಾ ಯತಿವ್ಯಾಸ ರಾಜರ ಕಂಡೀರಾ || ವ್ಯಾಸ ಮಧ್ವರ ನೆಚ್ಚಿನ ಕೂಸು ವ್ಯಾಸರ ಶಾಸ್ತ್ರದಿ ಕುಶಲದ ಕೂಸು ವ್ಯಾಸರ ಶಿಷ್ಯಾವೇಶದ ಕೂಸು ಹಾಸ್ಯವ ಮಾಡಿದ ಮಾಯ್ಗಳ ಕೂಸು. ೧ ಮಂತ್ರದ ಕೋಟಿಯ ಜಪವನು ಗೈದರ ಯಂತ್ರದ ಪಾಶದಿ ಹನುಮನ ಬಿಗಿದ ತಂತ್ರದ ಯುಕುತಿಯ ಬಳಸುತ ನೀತಿಲಿ ಕಂತ್ರಿಯ ಶಿರವನು ಪದದಲಿ ಮೆಟ್ಟಿದ. ೨ ಕೃಷ್ಣನ ಕುಹಕವ ತೆರೆದರ ಮನದಿ  ಕೃಷ್ಣನ ಚರಣಾರಾಧಕ ಮುನಿಯ ಕೃಷ್ಣಾವಲ್ಲಭ ಪ್ರೀತಿಯ ಬಲದಿ  ಕೃಷ್ಣ ಪ್ರಿಯಕರ ಗ್ರಂಥವ ಬರೆದ ೩ ದಂಡರುದ್ದಂಡರ ಮೋಹವ ಕಳೆವ ಚಂಡಪ್ರಚಂಡರ ಮತಿಯನು ಕೊಡುವ  ಮಂಡನ  ಪುಂಡರಿ ಕಾಕ್ಷನ ಮಹಿಮೆಯ ಹಿಂಡನು ಡಂಗುರ ಸಾರಿದ ಮುನಿಪ ೪  ಕಾಮಗಳೆಲ್ಲವ ಗೆದ್ದಿತು ಕೂಸು ಕಾಮಿತವರಗಳ ಸೂಸುವ ಕೂಸು ಶ್ರೀ ಮಧ್ವನಾಥನ ಮುದ್ದಿನ ಕೂಸು ಸೀಮೆಯು ಇಲ್ಲದ ಗುಣಗಳ ಕೂಸು. ೫