Deva bandanu Odeya bandanu
ದೇವ ಬಂದನು ಒಡೆಯ ಬಂದನು
ಕಾವ ಗೋಗಳ ಬಂದನು |
ಕಾವ ಗೋಗಳ ಕಾಮಿತಾರ್ಥವ
ನೀವ ಭಕುತಗೆ ಬಂದನು || ೧
ಮುದ್ದು ಮುಂಗುರುಲಾಸ್ಯದ ಚೆಲುವ
ಒದ್ದು ಬಂಡಿಯ ಲೇಲೆಲಿ |
ಒದ್ದು ಬಂಡಿಯ ಲೇಲೆಲಿ ರಂಗದಿ
ಗೆದ್ದು ಮಾವನ ಮೋಹನ || ೨
ನೀಲ ಬಣ್ಣದ ಮಯ್ಯವ ಬಂದನು
ನೀಲ ವಸನನ ಸಹಜನು |
ನೀಲ ವಸ್ತ್ರನ ತಮ್ಮನು ಅಂಬುಜ
ಮಾಲನು ಆಡುತ ಬಂದನು || ೩
ಸತಿಗೆ ಪುಷ್ಪದ ಭೂರುಹವಿತ್ತವ
ಪತಿತ ಪಾವನ ಬಂದನು |
ಪತಿತ ಪಾವನ ದಾಸರು ಪಾಡುವ
ತುತಿಗೆ ಹಿಗ್ಗುವ ಬಂದನು || ೪
ನಾಥ ರಕ್ಷಿಸು ಎನ್ನುತಲಾ ಮಹ
ಗಾತ್ರನು ಸೂನವನರ್ಪಿಸಲು |
ವಾತನಯ್ಯನು ಬಂದನು ಮಧ್ವ
ಕಾವ ಗೋಗಳ ಬಂದನು |
ಕಾವ ಗೋಗಳ ಕಾಮಿತಾರ್ಥವ
ನೀವ ಭಕುತಗೆ ಬಂದನು || ೧
ಮುದ್ದು ಮುಂಗುರುಲಾಸ್ಯದ ಚೆಲುವ
ಒದ್ದು ಬಂಡಿಯ ಲೇಲೆಲಿ |
ಒದ್ದು ಬಂಡಿಯ ಲೇಲೆಲಿ ರಂಗದಿ
ಗೆದ್ದು ಮಾವನ ಮೋಹನ || ೨
ನೀಲ ಬಣ್ಣದ ಮಯ್ಯವ ಬಂದನು
ನೀಲ ವಸನನ ಸಹಜನು |
ನೀಲ ವಸ್ತ್ರನ ತಮ್ಮನು ಅಂಬುಜ
ಮಾಲನು ಆಡುತ ಬಂದನು || ೩
ಸತಿಗೆ ಪುಷ್ಪದ ಭೂರುಹವಿತ್ತವ
ಪತಿತ ಪಾವನ ಬಂದನು |
ಪತಿತ ಪಾವನ ದಾಸರು ಪಾಡುವ
ತುತಿಗೆ ಹಿಗ್ಗುವ ಬಂದನು || ೪
ನಾಥ ರಕ್ಷಿಸು ಎನ್ನುತಲಾ ಮಹ
ಗಾತ್ರನು ಸೂನವನರ್ಪಿಸಲು |
ವಾತನಯ್ಯನು ಬಂದನು ಮಧ್ವ
ನಾಥನು ಪಕ್ಷಿಯ ವಾಹನ || ೫
Comments
Post a Comment