Vysarendare Vedavysa

ವ್ಯಾಸರೆಂದರೆ ವೇದವ್ಯಾಸ ದೇವರ ದೇವ | ಪ 
ಘಾಸಿ ಮಾಡದೆ ಇವನ ಭಜಿಸೆಲೊ ಮನುಜ | ಅ.ಪ.

ವರಜಟಾ ಮಂಡಲ ಮುನಿಗಳ ಪುಂಗವ
ಪರಿಪರಿ ಶೃತಿಗಳ ಕಡೆದವನಂದದಿ |
ಪುರಹರನಂಶನ ಜನಕನು ಸೂರಿಯು
ಹರಿನಿಲದ ನೀಲ ಮಯ್ಯವಗುಣಿಯು || ೧

ತುಂಬುರು ನಾರದ ದಿವಿಜರ ಪ್ರೀತನು
ಬೆಂಬಿಡದೆ ಕಾಮಿತ ವರಗಳ ನೀವನು|
ಜಂಬುನದಾಂಬರ ಮಣಿಗಳ ಮಾಲನು
ಅಂಬುಜನಯನನು ಇಂದಿರೆ ರಮಣನು || ೨

ಪರಶರ ಋಷಿಗಳ ನಂದನ ನಂದನು
ಸುರರನು ಭೋದಿಪ ಮುರಹರರೂಪನು|
ಗುರುವರ ಜಗಕೆಲ್ಲ ಸೂತ್ರದ ಕರುತು
ಗುರುಮಧ್ವರಾಯರ ಇಷ್ಟದ ದೈವತ || ೩

ವ್ರತ ಯಜ್ಞ ತಪಸಿಗೆ ನಿಲುಕದ ಮಾಣಿಕ
ಪತಿತಭಕುತರನು ಸೆಳೆಯುವ ಮುಕುತಿಗೆ|
ಹತಮಾಡುವನೀತ ಅಸುರರ ಸಮರದಿ
ರತಿಪತಿಜನಕನು ಮೊಸಳೆಯ ಪಾಲನು || ೪

ಭವವೆಂಬ ಕಡಲನು ತರಿಸುವ ನೌಕನು
ಕವಿಗಳ ಹೃದಯಕೆ ಮನೋಹರಮೂರುತಿ |
ಗವಿಯೊಳಗಿರುವನು ಒಂದೇಳಲಾಡುವನು 
ಜವಪಿತ ಗುರುಮಧ್ವ ನಾಥನ ಪೆಸರವ || ೫ 

Comments

Popular posts from this blog

Kusina kandira namma Guruvyasara kandira

Poreyenna poreyenna pundarikaksha

Mahadevara Mahime