Poreyenna poreyenna pundarikaksha

ಪೊರೆಯನ್ನ ಪೊರೆಯನ್ನ ಪುಂಡರಿಕಾಕ್ಷ
ಪಂಕಜ ನಾಭ ಶ್ರೀ ಪಂಡರಿ ರಾಯ ।

ಭವ ಗಡು ಗಾಡಲಿ ತಿರುಗುತ್ತಿರುಗುತಿರೆ.
ಕವಿದಿರೆ ಕತ್ತಲು ಒಳಪೊರ ಗೆಲ್ಲಲು ।
ಕವಿನಿನ್ನ ಮಹಿಮೆಂಬ ಇನನನ್ನೆ  ಕಳುಹಿಸೋ.
ಭವಬೊಮ್ಮ ಪ್ರವರ್ತಕ ಪ್ರಭುವೆನ್ನ ಕೇಶವ ।।೧।।

ಸರ್ವಗುಣ ಪೂರ್ಣನೆ ಸರ್ವದೋಷ ದೂರನೆ.
ಸರ್ವ ಗುಣಗಳಿಂದಲಿ ಚತುರ್ಮುಖೋಪಾಸ್ಯನೆ ।
ಸರ್ವರಿಂದ ಗಮ್ಯನೆ ಬ್ರಹ್ಮಸೂತ್ರಗಳ್ನಿತ್ಯ.
ಸರ್ವಾಧ್ಯಾಯಪ್ರತಿಪಾದ್ಯ ದೊರೆಯನ್ನ ನಾರಾಯಣ।। ೨ ।।

ಶುದ್ದಿಮಾಡೋ ಎನ್ನಮನ ಬಿನ್ನೈಪೆನು ನಾ ನಿನ್ನ .
ಬದ್ಧನಾಗಿ ಒದ್ದಾಡುವೆ ತ್ರಿಗುಣಂಗಳ್ರಜ್ಜುವಿಂದ ।
ಸಿದ್ಧಿಗಳ ನೀನಯ್ಯ ಸಾಧನೆಗಳ್ತ್ವರದಲಿ.
ಬುದ್ಧಿಯಿತ್ತು ಸಲಹಯ್ಯ ರಮ್ಮೆ ಪತಿ ಮಾಧವನೆ ।।೩।।

ಕಾದಿರುವೆ ಸದಾ ನಿನ್ನ ಕರುಣೆಯು ಬಾಹುದೆಂದು.
ಬಂದಿರುವೆ ನಿನ್ನಲ್ನಾನು ಮೊರೆಯನ್ನು ಪೋಕ್ಕುತಲಿ।
ಕುಂದನೇಣಿಸದೆಯನ್ನು ಸಲಹೆನ್ನ ದಯತೋರಿ.
ವೇದಗಳಿಂವೇದ್ಯನಯ್ಯ ತಂದೆಯೆ ಶ್ರೀಗೊವಿಂದನೆ ।। ೪ ।।

ಇಷ್ಟು ಕೋಪವೇಂತಯ್ಯ ನಿತ್ಯದಯಿ ಶ್ರೀಪತಿ .
ಕಷ್ಟದವೆಲ್ಲ ತೆರೆಯಯ್ಯ  ಕರುಣಾಳು ಭವದಲ್ಲಿ ।
ಶಿಷ್ಟ ಪ್ರೀತ ಭಕ್ತಪ್ರೇಮಿ ಪೇಳಲೆಂತೋ ನಿನ್ನ ಗುಣ .
ಇಷ್ಟಂತಿಲ್ಲಾದಷ್ಟಂತಿಲ್ಲ ವ್ಯಾಪ್ತ ದೊರೆ ವಿಷ್ಣೋ ಎನ್ನ ।।೫।।

ಗುಣವೊಂದನಾದರು ಅರಿಯುವಬಲವಿಲ್ಲ.
ಮಣಮಣ ದೋಷದಿಂದ ಗ್ರಸ್ತನಾಗಿ ಕೆಟ್ಟಿರುವೆ।
ಅಣಿಮಾದಿಮಹಿಮನೆ ತವಕದಿನ್ದುದ್ಧರಿಸೋ. 
ಅಣುರೇಣುವಿತತನೆ ತಂದೆಮಧುಸೂದನ ।। ೬ ।।

ಅಣ್ಣ ಶಕ್ರದೇವ ಬೇಡೆ ತಮ್ಮನಾಗಿ ಪುಟ್ಟಿದೆಯೋ.
ಸಣ್ಣ ಮೂರ್ತಿ ಬ್ರಹ್ಮಚಾರಿ ಬ್ರಹ್ಮಪಿತ ಬ್ರಹ್ಮ ವೇದ್ಯ ।
ಬಣ್ಣಗಳ ಮಾತನಾಡಿ ಬಲಿಯನ್ನು ತುಳಿದೆಯೋ.
ಕಣ್ಣುಗಳ ನೋಟವನ್ನು ಬೀರೆನ್ನಲ್ಲಿ ತ್ರಿವಿಕ್ರಮ ।। ೭ ।।

ವಾಮಭಾಗದಮ್ಸೊಪರಿ ಶುಭ ಯಜ್ಞ ಸೂತ್ರವನ್ನು.
ಭಾಮೆಯರ ಚೆಲುವಿಗೆ ನಿಯಮಿಪ ದೊರೆಯೇ।
ಕಾಮಪಿತ ಕಾಮಿತಾರ್ಥದಾಯಕನೆ ಸಣ್ಣನೆ.
ವಾಮನಯ್ಯ ಕಾಯೋಅಯ್ಯ ಕಮಂಡಲಾಜಿನಧಾರಿ ।। ೮ ।।

ಮಂದರವ ಬೆನ್ನಿನೋಳು ಪೊತ್ತಿದನೆ ಘನ್ನನೆ .
ಕುನ್ದುಗಳನ್ಕಳೆಯಯ್ಯ ರಮ್ಮಪತಿ ಶ್ರೀಧರ।
ಮಂದಿರಕ್ಕೆ ತೊರಿಸಯ್ಯ ಹಾಧಿಯನ್ನು ದಯದಲಿ.
ಹಿಂದೆ ಹಿಂದೆ ಬರುವೆನು ವತ್ಸವೆಲ್ಲ ಅಮ್ಮನ್ನನ್ತೆ ।। ೯ ।।

ಭೂಮಂಡಲ ಸಾಲದೆನ್ನ ಪಾಪಂಗಳ ಗಣನೆಗೆ.
ಕಾಮಕ್ರೋಧ ಲೋಭಮೋಹ ಮದ ಮತ್ಸರಂಗಳ್ಪೂರ್ಣ।
ಶ್ಯಾಮರಾಮ ಭಕ್ತಾರಾಮ ಇಂದ್ರಿಯಂಗಳ್ಪತಿ ನಿನ್ನ.
ಕಾಮ್ಯಗಳನ್ಕಾಮಿಸುವ ಪದತೋರೋ ಹೃಷಿಕೇಶ ।। ೧೦ ।।

ಪದ್ಮಜನಿಪಿತ ನಿನ್ನ ಪದಗಳಿಗೆರಗುವೆ
ಪದ್ಮಸದ್ಮೆಯರಸನೆ ಪನ್ನಂಗಶಯನನೆ ।
ಪದ್ಮ ಮಿತ್ರ ಕೋಟಿ ತೇಜ ಪದ್ಮನಾಭರೂಪಿ ಘಣ್ಣ.
ಪದ್ಮಜನ್ಮಾಂಡಭಿತ್ತಿಯ ಪದ್ಮನಖಗಳಿಂ ಸೀಳ್ದ ।।೧೧।।

ದಾನವರಿ ದಾಮೋದರ ದ್ವಾರಕೆಯ ವಾಸಿಯೇ.
ದಾನವನ್ನು ಬೇಡಿದ್ಯಲ್ಲೋ ದಾನಿಗಳಿಗರಸನೆ।
ದಾನವಾರಿ ತನುಜಂಗೆ ದಾಮಂಗಳ ಪಿಡಿದೆಯೋ.
ತನುಜನ ಮತಿತೋರಿ ಅಮ್ಮನ್ಗೈಲಿ ಬದ್ಧನಾದ್ಯೋ।। ೧೨ ।।

ಜಗಂಗಳ ಸೃಷ್ಟಿಮಾಳ್ಪ ತ್ರಿಗುಣೆಪಂಕಜೆ ಯೋಡೆ .
ಜಗನ್ನಾಥ ಜಗದೊಳು ಸುಜನರಪ್ಪ್ರೀಯನು ।
ಹಿಗ್ಗುವರದ್ವೇಷಿ ತಾನು ಮೂರುಜಗವಂದಿತ. 
ಜಗವನ್ನೇ ಕರ್ಷಿಸುವ ಸಂಕರ್ಷಣ ಘನ್ನ ತಾನು ।। ೧೩।।

ವಸುದೇವದೇವಕಿಯರ್‌ಗರ್ಭದೊಳು ಪುಟ್ಟಿದನೆ.
ಅಸುದೇವಪ್ರಾಣಪತಿ ವಾಸುದೇವಮೂರುತಿ ।
ವಾಸಮಾಳ್ಪನೆಲ್ಲೆಲ್ನೋಡೆ ಪತಿತಪಾವನದೇವ.
ಹಾಸಿಗೆಯ ಮಾಡಿದ ಮುಸಲಧರನ್ನೆ ನೋಡು ।। ೧೪ ।।

ನೀನೇ ಎನ್ನ ತಾಯ್ತಂದೆ ನೀನೇ ಎನ್ನ ಬಾಂಧವನು.
ನಿನ್ನ ಎನ್ನ ಬಳಗವು ನೀನೇ ಎನ್ನ ಪರಗತಿ।
ಕೊನೆಗಿನ್ನು ನಿನ್ನ ಕಾಂತಿ ಗಾರಯ್ಯ ನೋಳ್ಪ ನಿನ್ನ.
ಮನೆಗಿನ್ನು ಎಷ್ಟು ದೂರ ಪೇಳೂ ನೀನೇ ಪ್ರದ್ಯುಮ್ನನೆ ।। ೧೫ ।।

ಮುನಿಜನಪ್ರಿಯ ಹರಿ ಮುಕುತಿಯ ನೀಯೋ ಸ್ವಾಮಿ.
ಮನದೊಳು ರಾಗದ್ವೇಷ ಬಿಡಿಸುತಲಂದದ ।
ನೆಲೆಯನ್ನು ಮಾಡೊ ತಂದೆ ಮನುಜನೆ ಸಲಹೆನ್ನ.
ಅನಿರುದ್ಧನಾವರಿಂದ ಅನಿರುದ್ಧ ಪಾಲಯ ಮಾ ।। ೧೬ ।।

ಪುರುಷರು ಇಬ್ಬರಯ್ಯ ಸೊಲ್ಲಯ್ಯ ನೀ ಲೋಕದೊಳು.
ಕ್ಷರಾಕ್ಷರಭೆದದಲಿ ಕ್ಷರರೆಲ್ಲ ಜೀವರು।
ಕ್ಷರಣವಿರಹಿತಳು ಅಂಭುಜಕರಳು ರಮೆ
ಕ್ಷರಾಕ್ಷರರ್ಮೀರುವ ತಾ ನಮ್ಮ ಪುರುಷೋತ್ತಮ ।। ೧೭ ।।

ಅಂಬುಧರ ಶ್ಯಾಮನಯ್ಯ ಅಂಬುಜಜಪಿತ ದೇವ.
ಬಿಂಬದಂಥ ತುಟಿಗಳಿಂ ಅಂಬುಜೆಯ ಚುಂಬನ ।
ಕಂಬುಸಮಕಂಧರನನು ಅಕ್ಷಂಗ ಳಿಗ್ನಿಲುಕನು.
ಶಂಭು ಪಿತಾಮಹನಯ್ಯ ಅಪ್ಪನಧೋಕ್ಷಜ ಕಾಯೋ ।। ೧೮ ।।

ನಿರಜೆಯೆ ಘೋರರೂಪ ನೋಡಿಲ್ವೆಂದು ಪೆಳ್ದಳನ್ತೆ.
ಮೂರ್ಲೋಕವು ಬೆಚ್ಚಿತಯ್ಯ ಕ್ರೂರ ನಖಂಗಳ ನೋಡಿ।
ನೀರಜಾಸಮೃಡಾದಿಗಳ್ ತುತಿ ಮಾಡೆ ಒಲಿಯದವ.
ನರಸಿಂಹ ಶಿಶುವಿಗೆ ಒಲಿದೆಯೋ ಕೆಸರಿಯೆ ।। ೧೯।।

ಅನ್ನವಿತ್ತ ಮಂದಿರಕ್ಕೆ ಕನ್ನವೆಂಬೋ ವಾರ್ತೆಯಂತೆ.
ಘನ್ನ ನಿನ್ನ ಮರಿವೆನು ಅನ್ನವಾಸ ಭೂಷ ದಾತ।
ಅನುರಾಗವೆನ್ನಲ್ತೋರಿ ಅನ್ನೆಯವೀ ಬಿಡಿಸಯ್ಯ.
ಅನಾಲಾಕ್ಷನಚ್ಯುತನೆ ಗುಣಚ್ಯುತಿ ಹೋರೆತನ್ನೆ ।। ೨೦ ।।

ಜಗಕೆಲ್ಲ ಜನ್ಮದಾತ ನಿನಗಾರೋ ಜನ್ಮಾದಾತ.
ಕುಗ್ಗಿಸುವ ಬಂಧನವ ನಿನಗಾರೊ ಬಂಧಕರು।
ಮಗನು ತಾ ಬೊಮ್ಮನಯ್ಯ ಮೃಡನೆ ಮೊಮ್ಮಗನಯ್ಯ.
ಸುಗತಿಯೆ ಕಾಯೋ ಎನ್ನ ಜನಾರ್ದನಾವದ್ಯದೂರ ।। ೨೧।।

ಅಮರನಗದಧರ ಅಮರನದಿಯಪದ.
ಅಮರಾಪಗಳ್ಸುತಂಗ್ಸುಮತಿಯ ಪ್ರೆರೈಸಿದ।
ಅಮರಸಮಿತಿಭಯ ಶಮನಸುಮನಪ್ರಿಯ.
ಅಮಾರಾಧಿಪನನುಜ ಅಮರೇಶೋಪೆಂದ್ರನೆ ।। ೨೨।।

ಅಂಬುಧರ ಶ್ಯಾಮನಯ್ಯ ಅಂಬುಜಜಪಿತ ದೇವ.
ಬಿಂಬದಂಥ ತುಟಿಗಳಿಂ ಅಂಬುಜೆಯ ಚುಂಬನ ।
ಕಂಬುಸಮಕಂಧರನನು ಅಕ್ಷಂಗ ಳಿಗ್ನಿಲುಕನು.
ಶಂಭು ಪಿತಾಮಹನಯ್ಯ ಅಪ್ಪನಧೋಕ್ಷಜ ಕಾಯೋ ।। ೧೮ ।।

ನಿರಜೆಯೆ ಘೋರರೂಪ ನೋಡಿಲ್ವೆಂದು ಪೆಳ್ದಳನ್ತೆ.
ಮೂರ್ಲೋಕವು ಬೆಚ್ಚಿತಯ್ಯ ಕ್ರೂರ ನಖಂಗಳ ನೋಡಿ।
ನೀರಜಾಸಮೃಡಾದಿಗಳ್ ತುತಿ ಮಾಡೆ ಒಲಿಯದವ.
ನರಸಿಂಹ ಶಿಶುವಿಗೆ ಒಲಿದೆಯೋ ಕೆಸರಿಯೆ ।। ೧೯।।

ಅನ್ನವಿತ್ತ ಮಂದಿರಕ್ಕೆ ಕನ್ನವೆಂಬೋ ವಾರ್ತೆಯಂತೆ.
ಘನ್ನ ನಿನ್ನ ಮರಿವೆನು ಅನ್ನವಾಸ ಭೂಷ ದಾತ।
ಅನುರಾಗವೆನ್ನಲ್ತೋರಿ ಅನ್ನೆಯವೀ ಬಿಡಿಸಯ್ಯ.
ಅನಾಲಾಕ್ಷನಚ್ಯುತನೆ ಗುಣಚ್ಯುತಿ ಹೋರೆತನ್ನೆ ।। ೨೦ ।।

ಜಗಕೆಲ್ಲ ಜನ್ಮದಾತ ನಿನಗಾರೋ ಜನ್ಮಾದಾತ.
ಕುಗ್ಗಿಸುವ ಬಂಧನವ ನಿನಗಾರೊ ಬಂಧಕರು।
ಮಗನು ತಾ ಬೊಮ್ಮನಯ್ಯ ಮೃಡನೆ ಮೊಮ್ಮಗನಯ್ಯ.
ಸುಗತಿಯೆ ಕಾಯೋ ಎನ್ನ ಜನಾರ್ದನಾವದ್ಯದೂರ ।। ೨೧।।

ಅಮರನಗದಧರ ಅಮರನದಿಯಪದ.
ಅಮರಾಪಗಳ್ಸುತಂಗ್ಸುಮತಿಯ ಪ್ರೆರೈಸಿದ।
ಅಮರಸಮಿತಿಭಯ ಶಮನಸುಮನಪ್ರಿಯ.
ಅಮಾರಾಧಿಪನನುಜ ಅಮರೇಶೋಪೆಂದ್ರನೆ ।। ೨೨।।

ಅಹಂಕಾರಮತ್ತರನ್ನು ಆಹಂಬುದ್ಧಿ ಪೂರ್ಣರನು.
ಅಹರ್ನಿಶಿ ಓದೆಯಯ್ಯ ಆಹಃಪತಿ ಕೋಟಿದ್ಯುತಿ ।
ಆಹಿಶಾಯಿ ಸಲಹೆನ್ನ ಅಹಮಿಕೆ ಬಿಡಿಸೆನ್ನ.
ಅಹರಹ ಭಕ್ತಪುಂಜ ಅಘಹಾರಿ ಹರಿಯೆ।। ೨೩।।

ಅಂಗಳದಿ ಆಡ್ಡ್ದೆಯಲ್ಲೋ ಅಂಗನೆಯನಾಡಿಸುತ.
ಮಂಗಳಾನ್ಗ ಮುಂಗುರುಳ ಮುದ್ದು ಮುಖ ಮೋಹನ್ನನೆ।
ದಿಗಂಬರಮೂರ್ತಿ ನಿನ್ನ ಜಗದಲಿ ಹಿಡಿವಾರೋ.
ಹಿಗ್ಗುವರು ಸುಜನರು ಚರ್ಯೆನೋಡಿ ಸಿರಿ ಕೃಷ್ಣ ।। ೨೪।।

ಇಂತು ಪಾಡಿ ಪೇಳ್ದೆನಯ್ಯ ಕುಂದನ್ನೋಡಿ ಕೋಪಬೇಡ.
ಕಂತುಪಿತ ಪದ್ಮನಾಭ ಮಂದಮತಿ ನಾನಯ್ಯ।
ಸಂತರಿದ ಪಾಡಿಪೋಗಳಿ ಮಧ್ವನಾಥ ಪೊರೆಯುವ.
ಸಂತ್ರಸ್ತರಶ್ರಮಹಾರಿ ಅಧ್ವದಲ್ಲಿ ಕೈಗೊಡುವ ।। ೨೫ ।।

Comments

Popular posts from this blog

Kusina kandira namma Guruvyasara kandira

Mahadevara Mahime