Mahadevara Mahime
ಮಹಾದೇವರ ಮಹಿಮೆ ಏನೆಂದು ಬಣ್ಣಿಸಲಿ || ಪ ||
ಮಹೀಧರ ನಳಿಯನ ಸುಜನ ಶಿರೋಮಣಿ || ಅ.ಪ ||
ಕಮಲ ನಾಭನ ನಾಭಿ | ಕಮಲದಿ ರಾಜಿಪ |
ಕಮಲಾಸನನಂಕ ವೇರಿರಲು |
ಕಮಲಾಕ್ಷನ ಸಖ ನಿ- | ಮ್ಮಂಗದಿ ನೋಡಿದ |
ಕಮಲೇಶನ ವಿಶ್ವರೂಪ ವಂದದಲಿ ||೧||
ಪತಿಯ ನಿಂದೆಯ ಕೇಳಿ |
ಸತಿಯು ದೇಹವ ಬಿಡೆ ಉಮೆಯರಸನೆ ನಿಮ್ಮ ಸಹನೆಯು ಕೆಡಲು |
ಅತಿಕೋಪದಿ ವೀರ | ಭದ್ರ ರೂಪದಿ ಬಂದು
ಹತ ಮಾಡಿದೆ ಮಾವ ದಕ್ಷನ ಶಿರವ ||೨||
ಪಾಲಿನ ಗಡಲನು |ಮಥನವ ಮಾಡಿರೆ
ಹಲಾಹಲವನು ಪಾನವ ಮಾಡಿದೆ. |
ನೀಲ ಕಂಧರನೆನಿಸಿ ಜಗದಲಿ ಮೆರೆದೆ |
ಶೂಲಧಾರಿಯೆ ಜಗವ ಪಾಲಿಪ ಹರನೆ || ೩||
ವಿರಕುತಿಶಾಲಿಯೆ ಮುರಹರ ದಾಸನೆ|
ಹರಿಯಲಿಮನಗೊಡು ಮನದಧಿಪತಿಯೆ |
ಸಿರಿ ಮಧ್ವ ನಾಥನ ತೋರಿಸಿ ಭವಭಯ
ಹರಣವ ಮಾಡುತ ಪೊರೆಯುವ ದೊರೆಯೇ || ೪ ||
ಮಹೀಧರ ನಳಿಯನ ಸುಜನ ಶಿರೋಮಣಿ || ಅ.ಪ ||
ಕಮಲ ನಾಭನ ನಾಭಿ | ಕಮಲದಿ ರಾಜಿಪ |
ಕಮಲಾಸನನಂಕ ವೇರಿರಲು |
ಕಮಲಾಕ್ಷನ ಸಖ ನಿ- | ಮ್ಮಂಗದಿ ನೋಡಿದ |
ಕಮಲೇಶನ ವಿಶ್ವರೂಪ ವಂದದಲಿ ||೧||
ಪತಿಯ ನಿಂದೆಯ ಕೇಳಿ |
ಸತಿಯು ದೇಹವ ಬಿಡೆ ಉಮೆಯರಸನೆ ನಿಮ್ಮ ಸಹನೆಯು ಕೆಡಲು |
ಅತಿಕೋಪದಿ ವೀರ | ಭದ್ರ ರೂಪದಿ ಬಂದು
ಹತ ಮಾಡಿದೆ ಮಾವ ದಕ್ಷನ ಶಿರವ ||೨||
ಪಾಲಿನ ಗಡಲನು |ಮಥನವ ಮಾಡಿರೆ
ಹಲಾಹಲವನು ಪಾನವ ಮಾಡಿದೆ. |
ನೀಲ ಕಂಧರನೆನಿಸಿ ಜಗದಲಿ ಮೆರೆದೆ |
ಶೂಲಧಾರಿಯೆ ಜಗವ ಪಾಲಿಪ ಹರನೆ || ೩||
ವಿರಕುತಿಶಾಲಿಯೆ ಮುರಹರ ದಾಸನೆ|
ಹರಿಯಲಿಮನಗೊಡು ಮನದಧಿಪತಿಯೆ |
ಸಿರಿ ಮಧ್ವ ನಾಥನ ತೋರಿಸಿ ಭವಭಯ
ಹರಣವ ಮಾಡುತ ಪೊರೆಯುವ ದೊರೆಯೇ || ೪ ||
Comments
Post a Comment