Namo namo Vadiraja

 ಭಜನಾ ಧಾಟಿ.

ನಮೊನಮೊ ನಮೊನೆಮೊ ವಾದಿರಾಜ |
ನಮೊನಮೊ ಶರಣರ ಸುರಭೂಜ ||

ಹಯಮುಖ ನೋಲಿಸಿದೆ ವಾದಿರಾಜ |
ಭಯಗಳ ಕೆಳೆವನೆ ವಾದಿರಾಜ | |

ಭಾವಿಸಮೀರನೆ ವಾದಿರಾಜ |
ಭೂವರಹ ಪ್ರಿಯ ವಾದಿರಾಜ | |

ಭೂಸುರ ವರ್ಯನೆ ವಾದಿರಾಜ |
ಸೂಸುವ ಸುಖವನು ವಾದಿರಾಜ | |

ಯುಕುತಿಯ ಮಲ್ಲಿಗೆ ವಾದಿರಾಜ | 
ಮುಕುತಿಗೆ ಮಾಡಿದೆ ವಾದಿರಾಜ | |

ಮುನಿಕುಲರನ್ನನೆ ವಾದಿರಾಜ |
ಮುನಿಗಳ ವಂದಿತ ವಾದಿರಾಜ | |

ಕಾಕು ಮತಂಗಳ ವಾದಿರಾಜ |
ಸಾಕು ಗೊಳಸಿದಾ ವಾದಿರಾಜ II

ಯತಿಕುಲಮುಕುಟನೆ ವಾದಿರಾಜ |
ವ್ರತ ತಪಸಿನ ಗುರು ವಾದಿರಾಜ II

ಮಧ್ವರ ದಾಸನೆ ವಾದಿರಾಜ |
ಬದ್ಧರ ಬಿಡಿಸುವ ವಾದಿರಾಜ I l

 ವಿಮಲ ಜ್ಞಾನನೆ ವಾದಿರಾಜ |
ಶಮಲವ ಹರಿಪನೆ ವಾದಿರಾಜ II  

ರಾಜರರಾಜನೇ ವಾದಿರಾಜ I
ವಾದಿರಾಜ ಗುರು ವಾದಿರಾಜ | |

ಸಿರಿ ಮಧ್ವ ನಾಥನ ವಾದಿರಾಜ
ಮರಳುಗೊಳಿಸಿದನೆ ವಾದಿರಾಜ ||

Comments

Popular posts from this blog

Kusina kandira namma Guruvyasara kandira

Poreyenna poreyenna pundarikaksha

Mahadevara Mahime