Ganapati Palipudu

ಗಣಪತಿ ಪಾಲಿಪುದು | ಮೃಡನ ಸುತನೆ ||

ಗಣಪತಿ ವಿಗ್ನಂಗಳ ಗಣಪತಿ ನಿನ್ನಯ |
ಗುಣಗಳ ನಿಕರಕೆ ಗಣನೆಯು ಬಾಹುದೆ. ||

ರಕ್ತಗಂಧವನಿತ್ತೆ ಭಕ್ತಿಯಿಂದನುದಿನ |
ರಕ್ತಾಂಬರ ಧರನೆ ಭಕ್ತಿಯ ಸಲಹಯ್ಯ ||

ಕುಮತಿಯ ತೆರೆದು ನಿ ಸುಮತಿಯ ಕೊಡು ದೇವ |
ಮಮತೆಯ ಬಿಡಿಸಯ್ಯ ಉಮೆಯ ಕುವರ ನೀನೇ ||

ಸಿಹಿ ಭಕ್ಷ್ಯ ಗಳನುಣ್ಣೆ ತುಹಿನ ಕಿರಣ ನಗೆ |
ಆಹಿಯನು ರಜ್ಜು ಗೈದೆ ಕುಹಕೆನ್ನ ರುಜು ಮಾಡು ||

ಗಾಥ ಪ್ರೀಯನೆ ಮಧ್ವ ನಾಥನ ಎಂದಿಗೂ |
ಗಾಥೆಯ ಮಾಳ್ಪ ಗಣ ನಾಥ ಪೋರೆಯೋ ಎನ್ನ ||

Comments

Popular posts from this blog

Kusina kandira namma Guruvyasara kandira

Poreyenna poreyenna pundarikaksha

Mahadevara Mahime