Gajamukha Vandipenu
ಗಜಮುಖ ವಂದಿಪೆನು| ಗುರುವೇ ಗಜಮುಖ ವಂದಿಪೆನು||
ಗಜಮುಖ ವಂದಿಪೆ ಸುಕುವರ ಮೂರುತಿ |
ಸುಜನರ ಪೊರೆಯುವ ಸುರವರ ಸುಚರಿತ ||
ಹರಸುತ ನಿರುತದಿ ಮನದವಗುಣಗಳ |
ಹರಿಸುತ ಸಲಹುವ ಶುಭರದನ ಮುಖ ||
ಹರಿಪದ ಪತಿ ನೀನು ಗುಣಗಣ ಭರಿತನೆ |
ಈಪರಿ ಭವಭಯ ಕಡಲೊಳು ಮುಳುಗಿಹೆ |
ಕೈ ಪಿಡಿದೆನ್ನನು ಪಾರವ ಸೇರಿಸು ಹೇ||
ಗಜಮುಖ ವಂದಿಪೆ ಸುಕುವರ ಮೂರುತಿ |
ಸುಜನರ ಪೊರೆಯುವ ಸುರವರ ಸುಚರಿತ ||
ಹರಸುತ ನಿರುತದಿ ಮನದವಗುಣಗಳ |
ಹರಿಸುತ ಸಲಹುವ ಶುಭರದನ ಮುಖ ||
ಹರಿಪದ ಪತಿ ನೀನು ಗುಣಗಣ ಭರಿತನೆ |
ಹರಿಪದದಲಿ ಮನ ನಾಟಿಸು ಕರುಣಿಯೆ ||
ಕೈ ಪಿಡಿದೆನ್ನನು ಪಾರವ ಸೇರಿಸು ಹೇ||
ಮರೆ ಗೊಳಿಸೆನ್ನಯ ಕುಂದನು ಎಣಿಸದೆ |
ಗುರು ಮಧ್ವ ನಾಥನ ತೋರಿಸು ದಯದಿ||
Comments
Post a Comment